ಸಮಾನ?

ಸಮಾನ ಮನಸ್ಕ ಗೆಳೆಯರೆ, ಗೆಳತಿಯರೆ,


ಅಂತರ್ಜಾಲದಲ್ಲಿ ಪ್ರಕಟಿಸ್ಪಡುವ ರಾಶಿ ರಾಶಿ ಬರೆಹಗಳಲ್ಲಿ ಎಷ್ಟೋ ಒಳ್ಳೆಯ, ಕುತೂಹಲಕಾರಿ ಬರೆಹಗಳು ನಮ್ಮ ಗಮನಕ್ಕೆ ಬಾರದೆ ಹರಿದು ಹಂಚಿ ಹೋಗಿರುತ್ತದೆ. ಉತ್ತಮ ಬರಹಗಳನ್ನು ಬರೆಯುತ್ತಿರುವ ಹಲವಷ್ಟು ಹೊಸಬರು ಹಾಗು ಅದಾಗಲೆ ಬರವಣಿಗೆಯನ್ನೆ ಕ್ಷೇತ್ರವಾಗಿಸಿಕೊಂಡ ಬರಹಗಾರರ ಬರೆಹಗಳನ್ನು ಒಂದೆಡೆ ಕಲೆಹಾಕಿ ನಮ್ಮನ್ನು ಚಿಂತನೆಗೆ ಹಚ್ಚುವ ವಿಚಾರಗಳು ಸಕಲರಿಗೂ ತಲುಪುವಂತೆ ಮಾಡುವ ಉದ್ದೇಶದಿಂದ "ಸಮಾನ" ಗುಂಪು ರೂಪುಗೊಂಡಿರುತ್ತದೆ.

ಬ್ಲಾಗ್ ಗಳು ಮೊದಲಿದ್ದ ಚಾರ್ಮ್ ನ್ನು ಉಳಿಸಿಕೊಂಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ ಬಹಳಷ್ಟು ಉತ್ತಮ ಹಾಗೂ ಸಮಾಜಮುಖಿ ಬ್ಲಾಗ್ ಲೇಖನಗಳೂ ರಚನೆಯಾಗುತ್ತಿರುವುದನ್ನು ಗುರುತಿಸಬಹುದಾಗಿದೆ. ಈ ನಿಟ್ಟಲ್ಲಿ ಅಂತಹ ಯಾವುದೇ ಬ್ಲಾಗ್ ಬರಹವಿರಲಿ, ದಿನ ಪತ್ರಿಕೆಗಳ ಅಂತರ್ಜಾಲ ಆವೃತ್ತಿಯಲ್ಲಿರುವ ಲೇಖನಗಳಿರಲಿ ಇಂತವುಗಳನ್ನು ಒಂದೆಡೆ ಸೇರಿಸುವ ಒಂದು ವಿಭಿನ್ನ ಪ್ರಯತ್ನ ಮಾಡಬಾರದೇಕೆ ಎನ್ನುವ ಯೋಚನೆ ಇಟ್ಟುಕೊಂಡು, ಯಾವುದೆ ನಿರ್ದಿಷ್ಟ ಬರಹ ಕ್ರಮಕ್ಕೆ ಮಾತ್ರ ಸೀಮೀತ ಗೊಳಿಸದೆ ಉತ್ತಮ ವಿಚಾರಗಳು ಅದಾವುದೇ ಮೂಲದಲ್ಲಿದ್ದರು ಸರಿ ಅದನ್ನ ತಂದು ಬಿತ್ತರಿಸುವ ಕೆಲಸವನ್ನು "ಸಮಾನ" ನಿಷ್ಠಯಿಂದ ಮಾಡುತ್ತದೆ.ಇಂತಹ ಸಂದರ್ಭದಲ್ಲಿ ಲೇಖಕ ಬರಹಗಾರರಿಗೆ ಹಾಗು ಅವುಗಳನ್ನು ಪ್ರಕಟಿಸಿದ ತಾಣಕ್ಕೆ ಗೌರವ ಸೂಚಿಸಲು ಬದ್ದರಾಗಿದ್ದುಕೊಂಡೆ ಉತ್ತಮ ವಿಚಾರ ಬರಹಗಳ ಕಣಜವಾಗಿ ಹಾಗೂ ಅವುಗಳ ಕುರಿತು ಸಂವಾದಕ್ಕೆ ಎಡೆಮಾಡುವ "ಸಮಾನ" ವನ್ನು ನಿಮ್ಮುಂದಿರಿಸಲು ನಮ್ಮ ಬಳಗದ ಪ್ರಾಮಾಣಿಕ ಪ್ರಯತ್ನ ಇದ್ದೆ ಇರುತ್ತದೆ. 

ಈ ಪ್ರಯತ್ನದಲ್ಲಿ ಬ್ಲಾಗ್ ಮತ್ತು ಫೇಸ್ ಬುಕ್ ಸಂಬಂಧವನ್ನು ಉಪಯುಕ್ತವಾಗಿ ಬಳಸಿಕೊಳ್ಳುತ್ತಿದ್ದೇವೆ. 

ಮನುಷ್ಯ ಜಾತಿ ತಾನೊಂದೇ ವಲಂ' ಎನ್ನುವ ಪಂಪನುಲಿಗೆ ನಿಷ್ಠರಾಗಿದ್ದು ಸಮಾನ ಮನಸ್ಕರೆನಿಸಿಕೊಂಡ ಗೆಳೆಯರು ಸೇರಿ ಹೀಗೊಂದು ಸಣ್ಣ ಪ್ರಯತ್ನವನ್ನು ನಿಮ್ಮ ಮುಂದಿಟ್ಟಿದ್ದೆವೆ.ನಿಮಗೆ ಒಪ್ಪಿಗೆಯಾದೀತು ಹಾಗೂ ನಿಮ್ಮ ಪ್ರೋತ್ಸಾಹ ದೊರಕೀತು ಎಂಭ ನಿರೀಕ್ಷೆಯಿಂದ ನಿಮ್ಮ ಬಳಿ

* ಸಮಾನ ಮನಸ್ಕ ಗೆಳೆಯರನ್ನು ಇಲ್ಲಿ ಸೇರಿಸಲು, 

* ನಿಮ್ಮ ಬರಹಗಳ ಅಥವಾ ನೀವು ಓದಿದ ಒಳ್ಳೆ ಬರೆಹದ ಕೊಂಡಿಯನ್ನು ಇಲ್ಲಿ ನೀಡಲು,

* ಸಮಾನ ಗುಂಪಿನಲ್ಲಿ ನಡೆಯುವ ಗಂಭೀರ ಚರ್ಚೆಗಳಲ್ಲಿ ಭಾಗವಹಿಸಲು,


* ಸಮಾನ'ದ ಆಶಯಗಳನ್ನು ನಿಮ್ಮ ನೆರೆ ಹೊರೆಯವರಿಗೆ ಹಂಚಲು
ವಿನಂತಿ

ಫೇಸ್ ಬುಕ್ "ಸಮಾನ" ಬಳಗವನ್ನು ಸೇರಲು ಇಲ್ಲಿ ಕ್ಲಿಕ್ಕಿಸಿ.


ಸಮಾನ ಬ್ಲಾಗ್ ಮಿಂಚಂಚೆ ವಿಳಾಸ:- 
samanakannada@gmail.com



ಇಂತು...
ಸಮಾನ ಬಳಗ.

No comments:

Post a Comment